Home ಕರಾವಳಿ Archive by category ಕಾಸರಗೋಡು (Page 2)

ಕಾಸರಗೋಡು: ಸಹಾಯದ ನಿರೀಕ್ಷೆಯಲ್ಲಿ ಪ್ರಶಾಂತ್ ರೈ ಕುಟುಂಬ

ಕಾಸರಗೋಡಿನ ಬದಿಯಡ್ಕ ನಿವಾಸಿ ಪ್ರಶಾಂತ್ ರೈ ಅವರು, ಲಿಂಪೋಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ. ಇದೀಗ ಬಡ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.ಪ್ರಶಾಂತ್ ರೈ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದು, ಇವರು ಹಲವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದವರಿಗೆ 35ರಿಂದ 40 ಲಕ್ಷ

ಮಂಜೇಶ್ವರ: ಕುಂಬಳೆಯಲ್ಲಿ ಕಾರು ಅಪಘಾತ : ಮಹಿಳೆ ಸಾವು

ಮಂಜೇಶ್ವರ: ಸೋಮವಾರ ಮಧ್ಯಾಹ್ನ ಮಟ್ಟಂ ಶಿರಿಯಾ ಬಳಿ ನಡೆದ ವಾಹನ ಅಪಘಾತದಲ್ಲಿ ಗಾಯಗೊಂಡ 62 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಕಾಇಾಂಗಾಡಿನ ಕೊವ್ವಲ್ಪಳ್ಳಿ ಮಾನ್ಯಾಟ ವಿಷ್ಣುಮೂರ್ತಿ ದೇವಸ್ಥಾನದ ಬಳಿ ನಿವಾಸಿ ನಫೀಸ (62) ಸಾವನ್ನಪ್ಪಿದ ದುರ್ದೈವಿ. ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಇತರ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಂಜೇಶ್ವರ : ಜ.19ರಿಂದ ಜ.24ರವರೆಗೆ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ

ಮಂಜೇಶ್ವರ ಕುಳೂರು ಸಂತಡ್ಕದ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.19ರಿಂದ ಜ.24ರವರೆಗೆ ನಡೆಯಲಿದೆ. ಜ.19ರಿಂದ ಜ.22ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಜ.23, 24ರಂದುವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ. ಜ.16ರಂದು ಗೊನೆಮುಹೂರ್ತ, ಜ.19ರಂದು ಹೊರೆಕಾಣೀಕೆ ಮೆರವಣಿಗೆ, ಧಾರ್ಮಿಕ ಸಭೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಜ.19ರಂದು ಸ್ವಯಂ ಸೇವಕರ ಬೃಹತ್ ಸಮಾವೇಶ

ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ಪೂರ್ವಭಾವಿಯಾಗಿ ಜ.19ರಂದು ಸಂಜೆ 3 ಗಂಟೆಗೆ ಸ್ವಯಂ ಸೇವಕರ ಬೃಹತ್ ಸಮಾವೇಶವು ನಡೆಯಲಿದೆ. ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಪರಿಸರದಲ್ಲಿ ಸ್ವಯಂ ಸೇವಕರ ಬೃಹತ್ ಸಮಾವೇಶ ನಡೆಯಲಿದೆ. ಉತ್ಸವದ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲಿಚ್ಚಿಸುವ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ

ಕಾಸರಗೋಡು: ಅನಾರೋಗ್ಯದಿಂದ ಬಳಲುತ್ತಿರುವ ಮೇಘಶ್ಯಾಮ್ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ಸಹಾಯಹಸ್ತ

ಕಾಸರಗೋಡಿನ ಬಳ್ಳೂರು ರಾಮಚಂದ್ರ ಅಚಾರ್ಯರ ಮಗ ಮೇಘಶ್ಯಾಮ ಎಂಬವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಇವರು ಮಂಗಳೂರು ವಜ್ರಹಿಲ್ಸ್ ಕದ್ರಿ ರಸ್ತೆಯ ಮಂಗಳಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.ಇವರಿಗೆ ತುರ್ತು ಶಸ್ತ್ರಕ್ರಿಯೆ ನಡೆಸಲು 8.5 ಲಕ್ಷ ರೂ. ಅಗತ್ಯವಿದೆಯೆಂದು ವೈದ್ಯರು ತಿಳಿಸಿದ್ದಾರೆ. ಈ ಮೊತ್ತವನ್ನು ಭರಿಸಲು ಕುಟುಂಬದ ಸದಸ್ಯರಿಗೆ ಸಾಧ್ಯವಾಗದ ಕಾರಣ

ಮಂಜೇಶ್ವರ: ಹೊತ್ತಿ ಉರಿದ ಎಂಎಫ್ ಫ್ರೇಂ ವರ್ಕ್ ಪ್ಲೈವುಡ್ ಕಾರ್ಖಾನೆ: ಭಾರೀ ಪ್ರಮಾಣದ ಸಾಮಾಗ್ರಿಗಳು ನಾಶ

ಮಂಜೇಶ್ವರ: ಮಂಜೇಶ್ವರ ಬಟ್ಟಿ ಪದವಿನಲ್ಲಿ ಕಾಯಾಚರಿಸುತ್ತಿರುವ ಎಂ ಎಫ್ ಫ್ರೇಂ ವರ್ಕ್ ಕಾರ್ಖಾನೆಯಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರ ಪರಿಣಾಮವಾಗಿ, ಕಾರ್ಖಾನೆ ಬಹುತೇಕ ಹೊತ್ತಿ ಉರಿದು ಭಾರೀ ಪ್ರಮಾಣದ ಸಾಮಾಗ್ರಿಗಳು ನಾಶಗೊಂಡಿದೆ. ಮಾಹಿತಿ ಅರಿತು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ಸುಗೊಂಡಿದ್ದಾರೆ.ಮಂಗಳೂರು ನಿವಾಸಿಗಳಾದ ಎಕೆ ನಿಯಾಸ್ ಹಾಗೂ ಅನಿಲ್ ಕುಮಾರ್ ರವರ

ಮಂಜೇಶ್ವರ: ಪೆರಿಯ ಜೋಡಿ ಕೊಲೆ ಪ್ರಕರಣದಲ್ಲಿ ಸಿಪಿಐಎಂ ಮಾಜಿ ಶಾಸಕ ಸೇರಿದಂತೆ 14 ಆರೋಪಿಗಳು ತಪ್ಪಿತಸ್ಥರೆಂದು ತೀರ್ಪು

ಮಂಜೇಶ್ವರ: ಪೆರಿಯ ಜೋಡಿ ಕೊಲೆ ಪ್ರಕರಣದಲ್ಲಿ ಸಿಪಿಐಎಂ ಮಾಜಿ ಶಾಸಕ ಕೆವಿ ಕುಂಞಿರಾಮನ್ ಸೇರಿದಂತೆ 14 ಆರೋಪಿಗಳು ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಮೊದಲನೇ ಆರೋಪಿಯಾಗಿ ಸಿಪಿಎಂ ನೇತಾರರಾದ ಎ. ಪೀತಾಂಬರನ್, ಎರಡನೇ ಆರೋಪಿಯಾಗಿ ಸಜಿ ಸಿ ಜಾರ್ಜ್ ಎಂಬ ಸಜಿ, ಮೂರನೇ ಆರೋಪಿಯಾಗಿ ಕೆ.ಎಂ. ಸುರೆಶ್, ನಾಲ್ಕನೇ ಆರೋಪಿಯಾಗಿ ಕೆ ಅನಿಲ್ ಕುಮಾರ್ ಎಂಬ ಅಬು, ಐದನೇ ಆರೋಪಿಯಾಗಿ ಜಿಜಿನ್, ಆರನೇ ಆರೋಪಿಯಾಗಿ ಶ್ರೀರಾಗ್ ಎಂಬ ಕೂಟು, ಏಳನೇ ಆರೋಪಿಯಾಗಿ

ಮಂಜೇಶ್ವರ : ಶಾಲು ಗ್ರೈಂಡರ್ ಗೆ ಸಿಲುಕಿ ಗೃಹಿಣಿಯ ದಾರುಣ ಸಾವು

ಮಂಜೇಶ್ವರ : ಗೃಹಿಣಿಯೊಬ್ಬಳು ಮಕ್ಕಳನ್ನು ಶಾಲೆಗೆ ಕಳಿಸಲು ತಿಂಡಿ ತಯಾರಿಸುವ ತರಾತುರಿಯಲ್ಲಿ ಶಾಲ್ ಗ್ರೈಂಡರ್ ಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಬುಧವಾರ ಮುಂಜಾನೆ 7 ಗಂಟೆಯ ಸುಮಾರಿಗೆ ಉಪ್ಪಳ ಗೇಟ್ ಅಪ್ನಾ ಗಲ್ಲಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಉಪ್ಪಳ ಗೇಟ್ ಅಪ್ನಾ ಗಲ್ಲಿ ನಿವಾಸಿ ಮುಂಬೈಯಲ್ಲಿ ಉದ್ಯಮಿಯಾಗಿರುವ ಇಬ್ರಾಹಿಂ ಎಂಬವರ ಪತ್ನಿ ಮೈಮೂನ (40) ಸಾವನ್ನಪ್ಪಿದ ದುರ್ದೈವಿ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮಂಜೇಶ್ವರ: ದರೋಡೆಗೆ ಯತ್ನ ಪ್ರಕರಣ: ಪರಾರಿಯಾಗಿದ್ದ ಓರ್ವನ ಸೆರೆ

ಮಂಜೇಶ್ವರ: ಬ್ಯಾಂಕ್ ದರೋಡೆಗೈಯಲು ಹೊಂಚು ಹಾಕಿ ಮಾರಕಾಯುಧಗಳ ಸಹಿತ ಕಾರಿನಲ್ಲಿ ಸಂಚರಿಸುತ್ತಿರುವ ಮಧ್ಯೆ ಊರವರು ಬೆನ್ನಟ್ಟಿ ಹಿಡಿಯುವಾಗ ಪರಾರಿಯಾದ ನಾಲ್ಕು ಮಂದಿ ಆರೋಪಿಗಳ ಪೈಕಿ ಒಬ್ಬನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಕಾಸರಗೋಡು ಪರಿಸರವಾಸಿಯಾದ ಈತ ಹಲವು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.2024 ಫೆಬ್ರವರಿ 8ರಂದು ಅಡ್ಯನಡ್ಕದ ಕರ್ನಾಟಕ ಬ್ಯಾಂಕ್‌ ಶಾಖೆ ಕಳವು ಪ್ರಕರಣದ ಆರೋಪಿಗಳಲ್ಲಿ ಈತನೂ

ಮಂಜೇಶ್ವರ: ಕುಖ್ಯಾತ ಕಳ್ಳರ ತಂಡದ ಸೆರೆ: ಠಾಣಾಧಿಕಾರಿ ಇ ಅನೂಪ್ ನೇತೃತ್ವದಲ್ಲಿ ಕಾರ್ಯಾಚರಣೆ

ಮಂಜೇಶ್ವರ : ಮಂಜೇಶ್ವರ ಠಾಣಾಧಿಕಾರಿ ಇ ಅನೂಪ್ ರವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾನುವಾರ ಮುಂಜಾನೆ ಮಜೀರ್ಪಳ್ಳದಲ್ಲಿ ಕುಖ್ಯಾತ ಕಳ್ಳರ ತಂಡವೊಂದನ್ನು ಸೆರೆ ಹಿಡಿಯಲಾಗಿದೆ. ಪೆಟ್ರೋಲಿಂಗ್ ನಡೆಸುತ್ತಿರುವ ಮಧ್ಯೆ ಕಾರೊಂದನ್ನು ತಡೆದು ತಪಾಸಣೆ ನಡೆಸುತ್ತಿರುವ ಮಧ್ಯೆ ಕಳ್ಳರ ತಂಡ ಸೆರೆಯಾಗಿದೆ.ಉಳ್ಳಾಲದ ಫೈಸಲ್, ತುಮಕೂರಿನ ಸಯ್ಯದ್ ಅಮಾನ್ ಎಂಬಿವರನ್ನು ಸೆರೆ ಹಿಡಿಯಲಾಗಿದೆ. ಇವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಪರಾರಿಯಾದವರಿಗೆ ಶೋಧ