ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್ ಮೊಬೈಲ್ ಶರ್ಟ್ ಮತ್ತು ಚಪ್ಪಲಿ ಅನಾಥವಾಗಿ ಸಿಕ್ಕಿದ್ದು, ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಸೊತ್ತುಗಳು ಇದಾಗಿದ್ದು,ಇದನ್ನು ಅಲ್ಲಿಟ್ಟು ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಮೇಶ್ ರೈ ಅವರು ಇತ್ತೀಚಿಗೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ
ಪುತ್ತೂರಿನ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಸಮರ್ಥ್ ಶೆಟ್ಟಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 550 ಅಂಕಗಳನ್ನು ಪಡೆದು ಡಿಸ್ಟಿಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಪುತ್ತೂರಿನ ಬೆಳ್ಳಾರೆ ನಿವಾಸಿಯಾಗಿರುವ ಪುಷ್ಪರಾಜ್ ಶೆಟ್ಟಿ ಮತ್ತು ಪ್ರಮೀಳಾ ಶೆಟ್ಟಿ ದಂಪತಿಯ ಸುಪುತ್ರನಾಗಿರುವ ಸಮರ್ಥ್ ಶೆಟ್ಟಿ ಅವರು ಎಸ್‌ಎಸ್‌ಎಲ್‌ಸಿ ಮಹತ್ತರ ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ 95,ಇಂಗ್ಲಿಷ್‌ನಲ್ಲಿ97, ಹಿಂದಿಯಲ್ಲಿ 92,
ಪುತ್ತೂರಿನ ಬೊಲ್ವಾರಿನಲ್ಲಿರುವ ತಮನ್ವಿ ಸಿಲ್ಕ್ಸ್ ಗ್ರಾಹಕರ ಮನಕೊಪ್ಪುವ ವಿಶಿಷ್ಠ ಸಂಗ್ರಹಗಳ ಮಳಿಗೆಯಾಗಿದ್ದು, ಎಕ್ಸ್‌ಕ್ಲೂಸಿವ್ ವೆಡ್ಡಿಂಗ್ ಕಲೆಕ್ಷನ್ ಸೆಂಟರ್ ಅಗಿದೆ. ತಮನ್ವಿ ಸಿಲ್ಕ್ಸ್‌ನಲ್ಲಿ ಕಾಂಜೀವರಂ ಸಾರೀಸ್, ಕಾಟನ್, ಸಿಲ್ಕ್ಸ್ ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್ ಸೆಮಿ ಸಿಲ್ಕ್ಸ್ ಸಾರೀಸ್, ಏಂಕಲ್ ಲೆಗ್ಗಿನ್ಸ್, ಪ್ಲಾಜೋ, ಪ್ರಿಂಟೆಡ್ ಶಾರ್ಟ್ಸ್, ಮೆಟಲಿಕ್ ಪ್ಯಾಂಟ್, ಕಾಟನ್ ಟುವೆಲ್ಸ್, ಪ್ಲೈನ್ ಟಾಪ್, ಟಿ-ಶರ್ಟ್ಸ್, ಕುರ್ತಿ ಸೆಟ್ಸ್, ಸಲ್ವಾರ್
ಪುತ್ತೂರು: ಸಂತ ಫಿಲೋಮಿನಾ ಕಾಲೇಜು(ಸ್ವಾಯುತ್ರ), ವ್ಯವಹಾರ ಆಡಳಿತ ವಿಭಾಗದ ಆಶ್ರಯದಲಿ.. “ಉದ್ರಮಶೀಲತೆ ಮತ್ತು ನಾವೀನ್ಯತೆಯ ಅನುಭವಾತ್ಮಕ ಸಮೂಹ ಚರ್ಚೆ” ಪ್ರಾಯೋಗಿಕ ತರಬೇತಿ ಕಾರ್ಯಕ್ರಮವನ್ನುಸಂಪನ್ಮೂಲ ವ್ಯಕ್ತಿಯಾದ ಜೇಸಿ ಕೃಷ್ಣಮೋಹನ್ ಅವರು ಮೊದಲಿಗೆ ಪದವಿ ಶಿಕ್ಷಣದ ನಂತರ ಸ್ಪರ್ಧಾತ್ಮಕ ಜಗತ್ತಿನಲಿ. ಮುಂದುವರೆಯಲು ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳು ಹಾಗೂ ಉದ್ಯೋಗವಕಾಶಗಳ ಬಗ್ಗೆ, ಅರಿತು ಭಾನ ಸಂಪಾದಿಸಲು ಇರುವ ಮೂಲಗಳ ಕುರಿತು
ಪುತ್ತೂರು: ಆಟೋ ರಿಕ್ಷಾ ಚಾಲಕ ಪೆರಿಯತ್ತೋಡಿ ನಿವಾಸಿಯೊಬ್ಬರು ಮನೆಯ ಬಳಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.3ರಂದು ನಡೆದಿದೆ. ಪೆರಿಯತ್ತೋಡಿ ದಿ.ಹುಕ್ರಪ್ಪ ಗೌಡ ಅವರ ಪುತ್ರ ಕೃಷ್ಣ(40ವ.)ರವರು ಆತ್ಮಹತ್ಯೆ ಮಾಡಿಕೊಂಡವರು. ಬೆಳಿಗ್ಗೆ ಅವರು ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ದಿದ್ದರು. ಮಧ್ಯಾಹ್ನದ ವೇಳೆ ಅವರಿಗೆ ಸಾಲ ವಸೂಲಿಗಾರರ ಕರೆ ಬಂದಿತ್ತು. ಅದಾದ ಬಳಿಕ ಅವರು ಮನೆಯ ಬಳಿಯ ಮರವೊಂದರ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಅವಿವಾಹಿತ ಯುವಕನೊಬ್ಬ ತನ್ನ ಮನೆಯ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ನಡೆಯಿದೆ . ಇಲ್ಲಿನ ಕಿಂಡೋವು ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ (28) ಆತ್ಮಹತ್ಯೆಗೈದ ಯುವಕ. ಕೂಲಿ ಕಾರ್ಮಿಕನಾಗಿದ್ದ ಶ್ರೀನಿವಾಸ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆ ಆತನ ಶವ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿತ್ತು ಈತನ ಸಾವಿಗೆ ಕಾರಣ ತಿಳಿದುಬಂದಿಲ್ಲ ಉಪ್ಪಿನಂಗಡಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, v4 ನ್ಯೂಸ್ ಹಾಗೂ ಎಂ.ಬಿ. ಫೌಂಡೇಶನ್ ಸಹಯೋಗದಲ್ಲಿ ಅರೆಭಾಷೆ ಕಾಮಿಡಿ ಇದರ ಮೊದಲ ಆಡಿಷನ್ ನ ಉದ್ಘಾಟನಾ ಕಾರ್ಯಕ್ರಮವು ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅರೆಭಾಷೆಯ ಸಂಸ್ಕೃತಿ ಆಚಾರ
ಪುತ್ತೂರು: ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್ ಆಗಮಿಸಲಿದ್ದಾರೆ. ಹಿರಿಯ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಪಾತ್ರ ಅವರು ವರ್ಗಾವಣೆಗೊಂಡ ಬಳಿಕ ಶ್ರವಣ್ ಕುಮಾರ್ ಪ್ರೊಬೆಷನರಿ ಸಹಾಯಕ ಆಯುಕ್ತರಾಗಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿರುವ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳನ್ನು
ಪುತ್ತೂರು: ಇತಿಹಾಸ ಪ್ರಸಿದ್ಧವಾಗಿರುವ ಪುತ್ತೂರಿನ 32ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಮಾ.1ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು, ಕಂಬಳವನ್ನು ಉತ್ತಮವಾಗಿ ನಡೆಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಹೇಳಿದರು. ಅವರು ಶನಿವಾರ ಪುತ್ತೂರು ದೇವಳದ ವಠಾರದಲ್ಲಿ ಕಂಬಳದ ಆಮಂತ್ರಣ ಪತ್ರಿಕೆಯನ್ನು
ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ಫೆ.4ರಂದು ರಾತ್ರಿ ಬೈಕ್ ಮತ್ತು ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.ಕೆಮ್ಮಿಂಜೆ ಬೈಲು ದಿ.ಪುರುಷೋತ್ತಮ ಎಂಬವರ ಪುತ್ರ ಚೇತನ್(46ವ)ರವರು ಮೃತಪಟ್ಟವರು. ಘಟನೆಯಿಂದ ಬೈಕ್ನಲ್ಲಿ ಸಹಸವಾರ ಮನೀಷ್(10ವ)ರವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ತೌಸಿಕ್ ಅವರು ಗಾಯಗೊಂಡಿದ್ದಾರೆ.




























