ಶಾಲೆಯಲ್ಲಿ ಪಾಠ ಪ್ರವಚನ ನಡೆಯುತ್ತಿರುವ ಶಾಲಾ ವೇಳೆಯಲ್ಲಿ ಮೈದಾನವನ್ನು ಇತರೆ ಯಾವುದೇ ಕಾರ್ಯಕ್ರಮಗಳಿಗೆ ನೀಡದಂತೆ ತಿಳಿಸಲು ಹೋದ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳಲ್ಲಿ ಕಾಲೇಜಿಗೂ ಮೈದಾನಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಮೂಲಕ ಪ್ರಾಂಶುಪಾಲರು ಕರ್ತವ್ಯ ಮರೆತು ವರ್ತಿಸಿದ್ದಾರೆ ಎಂದು ಆಕ್ರೋಶಿತರಾದ ಅವರು ಪೊಲೀಸ್ ಠಾಣಾ ಮೆಟ್ಟಲೇರಿದ್ದಾರೆ. ಈ ಬಗ್ಗೆ
ವಿದ್ಯುತ್ ಅವಘಢದಿಂದ ಮುಚ್ಚಿದ ಅಂಗಡಿಯ ಒಳಗೆ ಬೆಂಕಿ ಕಾಣಿಸಿಕೊಂಡು ಅಕ್ವೇರಿಯಂಗಳ ಸಹಿತ ವಿವಿಧ ಜಾತಿಗಳ ಹಕ್ಕಿ ಸಹಿತ ವಿವಿಧ ಜಾತಿಗಳ ಮೀನುಗಳು ಬೆಂಕಿಯಲ್ಲಿ ಸಿಲುಕಿ ಭಸ್ಮವಾದ ಘಟನೆ ನಡೆದಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪಡುಬಿದ್ರಿ ಮುಖ್ಯ ಮಾರುಕಟ್ಟೆ ರಸ್ತೆಯ ಪೊಲೀಸ್ ಠಾಣಾ ಸಮೀಪದ ಗ್ರಾ.ಪಂ. ಕಟ್ಟಡದ ಅವಿಘ್ನ ಅಕ್ವೇರಿಯಂ ಮಾರಾಟದಂಗಡಿಯಲ್ಲಿ ಮುಂಜಾನೆ ಹೊಗೆ ಕಾಣಿಸಿಕೊಂಡಿದ್ದು ಇದನ್ನು ಕಂಡ ಸಾರ್ವಜನಿಕರು ಪೆÇಲೀಸರಿಗೆ ಮಾಹಿತಿ
ಇದೇ ಬರುವ ಸೆಪ್ಟೆಂಬರ್ 26 ರಿಂದ ಅಕ್ಟೊಬರ್ 5 ರವರೆಗೆ ನವರಾತ್ರಿಯ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುವ “ಉಚ್ಚಿಲ ದಸರಾ ಉತ್ಸವ-2022″ದ ರೂಪುರೇಷೆಗಳ ನಾಡೋಜ ಡಾ. ಜಿ. ಶಂಕರ್ ಅವರ ನೇತೃತ್ವದಲ್ಲಿ ಹಾಗೂ ದ. ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ. ಸಿ. ಕೋಟ್ಯಾನ್ ಉಪಸ್ಥಿತಿಯಲ್ಲಿ ದಸರಾ ಸಮಿತಿಯ ಸದಸ್ಯರ ಸಭೆ ನಡೆಸಲಾಯಿತು. ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಈ ಬಾರಿ ನವರಾತ್ರಿ ಉತ್ಸವವನ್ನು ದಸರಾ ರೀತಿಯಲ್ಲಿ
ಪಡುಬಿದ್ರಿಯ ಪುರಾಣ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಿಶೇಷ ಕಟ್ಟದಪ್ಪ ಸೇವೆ ಜರಗಿತು.ಅವಿಭಜಿತ ಜಿಲ್ಲೆಯಲ್ಲದೆ ದೇಶ ವಿದೇಶಗಳ ಭಕ್ತರು ಇಲ್ಲಿ ನಡೆಯುವ ವಿಶೇಷ ಕಟ್ಟದಪ್ಪ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ. ಶ್ರೀಕ್ಷೇತ್ರದಲ್ಲಿ ನಿರಂತರ ನಡೆಯುವ ಬೆಲ್ಲದಪ್ಪ ಮತ್ತು ಪೆÇಟ್ಟಪ್ಪ ಸೇವೆಗಳು ಇಲ್ಲಿನ ವಿಶೇಷ ಸೇವೆ. ಈ ದಿನ ನಡೆಯುವುದು ಸಾರ್ವಜನಿಕ ಕಟ್ಟದಪ್ಪ(ಕಟಾಹಪೂಪ)ಸೇವೆ. ಪಡುಬಿದ್ರಿ ಗ್ರಾಮದ ಕಲ್ಲಟ್ಟೆ ಎಂಬ ಪ್ರದೇಶದಲ್ಲಿ
ಪಡುಬಿದ್ರಿ ಗ್ರಾಮದ ಪಾದೆಬೆಟ್ಟುವಿನಲ್ಲಿ ಬಹಳಷ್ಟು ವರ್ಷಗಳಿಂದ ಅನಧಿಕೃತವಾಗಿ ದಲಿತ ಕಾಲೊನಿಯಲ್ಲಿ ಸುತ್ತಲೂ ವಾಸದ ಮನೆಗಳಿರುವ ಪ್ರದೇಶದಲ್ಲಿ ಗ್ಯಾಸ್ ಗೋಡಾನ್ ಕಾರ್ಯಚರಿಸುತ್ತಿದ್ದರೂ ಈ ಬಗ್ಗೆ ಗ್ರಾ.ಪಂ. ಸಹಿತ ಸಂಬಂಧಿಸಿದ ಇಲಾಖಾಧಿಕಾರಿಗಳು ತೆರವುಗೊಳಿಸಲು ನಿರ್ಲಕ್ಷ್ಯ ಧೋರಣೆ ತಾಳಿದು, ಅನಿವಾರ್ಯ ಸ್ಥಿತಿ ಒದಗಿ ಬಂದರೆ ನಾವೆಲ್ಲರೂ ಒಂದಾಗಿ ಅಪಾಯಕಾರಿ ಗೋಡನ್ ದ್ವಂಸಗೊಳಿಸುವುದಾಗಿ ದಲಿತ ಮುಖಂಡ ಸುಂದರ್ ಮಾಸ್ತರ್ ಎಚ್ಚರಿಸಿದ್ದಾರೆ. ಗೋಡಾನ್ ಪ್ರದೇಶದಿಂದ
ಪಡುಬಿದ್ರಿಯ ಪಾದೆಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲಾ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪಡುಬಿದ್ರಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಉಚಿತವಾಗಿ ನೋಟ್ ಬುಕ್ ವಿತರಿಸಲಾಯಿತು. ಪುಸ್ತಕ ವಿತರಿಸಿ ಮಾತನಾಡಿದ ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿಮಲ ಕೆ. ಸಾಲ್ಯಾನ್, ಕೊರೋನಾ ರೋಗದ ಬಳಿಕ ಜೀವನ ಬಹಳಷ್ಟು ಕಷ್ಟಕರವಾಗಿದ್ದು, ಮಕ್ಕಳ ಹೆತ್ತವರಿಗೆ ಮಕ್ಕಳ ಶಿಕ್ಷಣದ ಬಗೆಗಿನ ಹಾಗು ಹೋಗುಗಳ ಸಣ್ಣ ಅಗತ್ಯತೆಗಳನ್ನು ನೀಗಿಸಲು ಸಮಸ್ಯೆಯಾಗುತ್ತಿದ್ದು, ಈ
ಪಡುಬಿದ್ರಿಯಲ್ಲಿ ನವೀಕೃತ ಹವಾನಿಯಂತ್ರಿತ ಸಿಟಿ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ ಕೃಷಿ ಸಲಕರಣೆಗಳ ಮಾರಾಟ ವಿಭಾಗದ ಶುಭಾರಂಭವು ಜು. 9 ರಂದು ನಡೆಯಲಿದೆ.ಗ್ರಾಹಕರಿಗೆ ಹವಾನಿಯಂತ್ರಿತ ಶಾಖೆಯೊಂದಿಗೆ ಸೊಸೈಟಿಯಲ್ಲಿ ದೊರಕುತ್ತಿರುವ ವಿವಿಧ ಸೇವೆಗಳನ್ನು ಆಧುನೀಕರಣ ಗೊಳಿಸುವ ಸಲುವಾಗಿ ಪಡುಬಿದ್ರಿ ಸೊಸೈಟಿಯ ಹೃದಯ ಶಾಖೆಯಾದÀ ಸಿಟಿ ಶಾಖೆಯನ್ನು ಸಂಪೂರ್ಣ ಹವಾನಿಯಂತ್ರಿತ ಶಾಖೆಯನ್ನಾಗಿ ನವೀಕೃತ ಗೊಳಿಸಿ ಇದರೊಂದಿಗೆ ಕೃಷಿ ಸಲಕರಣೆ ಮಾರಾಟ ವಿಭಾಗದ ಉದ್ಘಾಟನೆಯನ್ನು
ಲಾರಿಯೊಂದು ದ್ವಿಚಕ್ರ ವಾಹನದ ಮೇಲೆ ಮಗುಚಿ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರಿ ಜಂಕ್ಷನ್ ನಲ್ಲಿ ನಡೆದಿದೆ.ಮೃತರನ್ನು ಕಂಚಿನಡ್ಕ ನಿವಾಸಿ ಶಂಸುದ್ದೀನ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಲಾರಿ ಪಡುಬಿದ್ರಿ ಜಂಕ್ಷನ್‍ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದ ಮೇಲೆ ಮಗುಚಿಬಿತ್ತು. ಸ್ಥಳದಲ್ಲೇ ಮೃತಪಟ್ಟ ಶಂಶುದ್ದೀನ್ ಅವರ ಮೃತದೇಹವನ್ನು ಪೋಲಿಸರು ಸ್ಥಳೀಯರ