Home Archive by category mangaluru (Page 46)

ಅಂತರಾಷ್ಟಿಯ ಸೌಂದರ್ಯ ಸ್ಪರ್ಧೆಯಲ್ಲಿ ಶ್ವೇತಾ ಮೌರ್ಯ

ಬೆಂಗಳೂರಿನ ಖ್ಯಾತ ಮೊಡೆಲ್ ಹಾಗೂ ಮಹಿಳಾ ಉದ್ಯಮಿ ಶ್ವೇತಾ ಮೌರ್ಯ ಅವರು ಸಿಂಗಾಪುರದಲ್ಲಿ ನಡೆಯುತ್ತಿರುವ ಮಿಸೆಸ್ ವರ್ಲ್ಡ್ ವೈಡ್ 2022 ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. 35 ದೇಶಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗಹಿಸುತ್ತಿದ್ದಾರೆ. ಬುಧವಾರದಂದು ಮೊದಲ ಸುತ್ತಿನ ಸ್ಪರ್ಧೆ ಆರಂಭಗೊಳ್ಳಲಿದ್ದು, ಅಕ್ಟೋಬರ್ 30 ರಂದು ಅಂತಿಮ

ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯ, ಮಂಗಳೂರು ತಾಲೂಕು ವಾಲಿಬಾಲ್ ಸಂಸ್ಥೆ ಇವರ ಸಹಯೋಗದೊಂದಿಗೆ, ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಬಾಲಕಿ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದ ಜಿಲ್ಲಾ ಚಾಂಪಿಯನ್ ಶಿಪ್ ಅ.29ರಂದು ನಗರದ ಮಂಗಳಾ ಸ್ಟೇಡಿಯಂ ವಾಲಿಬಾಲ್ ಅಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್. ಸತೀಶ್ ಕುಮಾರ್ ಹೇಳಿದರು. ಈ ಕುರಿತು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ

ಪುತ್ತೂರು : ಅ.27 ರಂದು ಚೆನ್ನಾವರ ಮುಹಿಯುದ್ದಿನ್ ಜುಮಾ ಮಸೀದಿಯ ಖಿದ್ಮತುಲ್ ಇಸ್ಮಾಂ ಜಮಾಅತ್ ಕಮಿಟಿಗೊಳಪಟ್ಟ ಸಿರಾಜುಲ್ ಉಲೂಂ ಮದ್ರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಪುತ್ತೂರು: ಸುಮಾರು ರೂ. 30ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೆನ್ನಾವರ ಮುಹಿಯುದ್ದಿನ್ ಜುಮಾ ಮಸೀದಿಯ ಖಿದ್ಮತುಲ್ ಇಸ್ಮಾಂ ಜಮಾಅತ್ ಕಮಿಟಿಗೊಳಪಟ್ಟ ಸಿರಾಜುಲ್ ಉಲೂಂ ಮದ್ರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಅ. 27ರಂದು ನಡೆಯಲಿದೆ ಎಂದು ಮಸೀದಿ ಕಮಿಟಿ ಅಧ್ಯಕ್ಷ ಶಾಫಿ ಚೆನ್ನಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನೂತನ ಮದ್ರಸ ಕಟ್ಟಡವನ್ನು ಸಯ್ಯದ್ ಬರ‍್ರುಸ್ಸಾದಾತ್ ಇಬ್ರಾಹಿಂ

ಮಂಗಳೂರು : ಪುತ್ತೂರಿನ ಕಾಣಿಯೂರಿನಲ್ಲಿ ಯುವಕರ ಮೇಲೆ ಗುಂಪೊಂದರಿoದ ಹಲ್ಲೆ

ಇತ್ತೀಚೆಗೆ ಪುತ್ತೂರಿನ ಕಾಣಿಯೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯ ಸೇರಿದ ಇಬ್ಬರು ವ್ಯಾಪಾರಕ್ಕೆ ಹೋದಾಗ ಅವರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಕಾನೂನಿನ ಸಂಪರ‍್ಣ ವಿಫಲತೆಯನ್ನು ನಾನು ಖಂಡಿಸುತ್ತೇನೆ. ಯುವಕರು ತಮ್ಮ ಹೊಟ್ಟೆಪಾಡಿಗಾಗಿ ಹಳ್ಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದಾರೆ.

ಮಂಗಳೂರು :ದೀಪಾವಳಿಯಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದೆ-ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ್ ಅಭಿಪ್ರಾಯ

ದೀಪವು ಮನೆ ಮತ್ತು ಬದುಕನ್ನು ಬೆಳಗುತ್ತದೆ. ದೀಪಾವಳಿಯಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದ್ದು, ಪಂಚಭೂತಗಳಲ್ಲಿ ಒಂದಾಗಿರುವ ಅಗ್ನಿಯೂ ಕೆಟ್ಟದನ್ನು ಭಸ್ಮಗೊಳಿಸಿ, ಸುಂದರ ಜೀವನ ರೂಪಿಸಲು ಸಹಕಾರಿ ಎಂದು ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು ಅವರು ಭಾನುವಾರ ಸಂಜೆ ರಾಷ್ಟಿ್ಯ ಸ್ವಯಂ ಸೇವಕ ಸಂಘದ ವತಿಯಿಂದ ಕಂದಾವರ ಪ್ರಿಯಾಂಕ ನಗರದ ಸೇವಾ ಬಸ್ತಿಯ ನಾಗರಿಕರಿಗೆ ದೀಪಾವಳಿ ಹಿಂದಿನ ದಿನದ ನೀರು ತುಂಬಿಸುವ ಕಾರ್ಯಕ್ರಮಕ್ಕೆ ದೇವಸ್ಥಾನದ

ಮೂಡುಬಿದರೆ : ಶಿರ್ತಾಡಿಯಲ್ಲಿ 25ನೇ ವರ್ಷದ ಗುರುಪೂಜೆ, ಬೃಹತ್ ಶೋಭಾಯಾತ್ರೆ

ಮೂಡುಬಿದಿರೆ : ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ), ಶಿರ್ತಾಡಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಮಹಿಳಾ ಘಟಕ ಶಿರ್ತಾಡಿ ಇವುಗಳ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣಗುರುಗಳ 168ನೇ ಗುರುಜಯಂತಿ ಆಚರಣಿಯ ಪ್ರಯುಕ್ತ 25ನೇ ವರ್ಷದ ಗುರುಪೂಜೆ ಮತ್ತು ಬೃಹತ್ ಶೋಭಾಯಾತ್ರೆಯು ಭಾನುವಾರ ಶಿರ್ತಾಡಿಯಲ್ಲಿ ನಡೆಯಿತು. ಗುರುಪೂಜೆಯ ಪ್ರಯುಕ್ತ ಬ್ರಹ್ಮ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ), ಶಿರ್ತಾಡಿ ಇಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ

ಉಚ್ಚಿಲ : ಕಾರು ಡಿಕ್ಕಿ ಹೊಡೆದು ಗಂಭೀರ ಗಾಯ- ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟ ವೃದ್ಧ

ವೃದ್ಧರೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿದ್ಧ ಅವರು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ಎಂಬಲ್ಲಿ ನಡೆದಿದೆ.ಉಚ್ಚಿಲ ನಿವಾಸಿ ನಾರಾಯಣ ಪೂಜಾರಿ(82) ಮೃತ ದುರ್ಧೈವಿ ಆಗಿದ್ದು, ಶುಕ್ರವಾರ ಸಂಜೆ ರಸ್ತೆ ದಾಟುತ್ತಿರುವಾಗ ಕೇರಳಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ನಾರಾಯಣ ಪೂಜಾರಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಲಕಾರಿಯಾಗಿದೆ

ಕುಂದಾಪುರ: ಉದಯೋನ್ಮುಖ ಪ್ರತಿಭೆ ರಾಜೇಶ್ ಕೆರ್ಗಾಲ್‌ರಿಗೆ ಸನ್ಮಾನ

ಉದ್ಯೋನ್ಮುಖ ಪ್ರತಿಭೆ ರಾಜೇಶ್ ಕೆರ್ಗಾಲ್ ಅವರಿಗೆ ಲಯನ್ಸ್ ಕ್ಲಬ್ ನಾವುಂದ ಹಾಗೂ ಸಾರ್ವಜನಿಕರ ವತಿಯಿಂದ ಅದ್ದೂರಿ ಸನ್ಮಾನದ ಕಾರ್ಯಕ್ರಮವು ಮಾಲಸ ಮಾಂಗಲ್ಯ ಆರ್ಕೇಡಾ ಅರೆಹೊಳೆ ಕ್ರಾಸ್ ನಲ್ಲಿ ಸಡಗರ ಸಂಭ್ರಮದಲ್ಲಿ ನಡೆಯಿತು. ತನ್ನಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಇನ್ನೊಬ್ಬರಿಗೆ ಸ್ಪೂರ್ತಿದಾಯಕವಾಗಿರುವ ಅದೆಷ್ಟು ಕಲಾವಿದರನ್ನು ಬೆಳೆಸಿದ ಅತಿ ಕಿರಿಯ ಪ್ರತಿಭೆ ರಾಜೇಶ್ ಕೆರ್ಗಾಲ್ ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಇವರ ಸಿನಿಮಾ ತಂಡದಲ್ಲಿ ಕೆಲಸ

ಮಂಗಳೂರು : ಶೈಕ್ಷಣಿಕ ಮತ್ತು ಸಂಶೋಧನಾ ಕುರಿತ ಕಾರ್ಯಕ್ರಮಗಳ ಬಗ್ಗೆ ಒಪ್ಪಂದ

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಫಿ ವಿಭಾಗ ಮತ್ತು ಥೀಮ್ ಫಿಸಿಯೋಥೆರಫಿ ಯುನಿವರ್ಸಿಟಿ ನೆದರ್‌ಲ್ಯಾಂಡ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಮತ್ತು ಸಂಶೋಧನಾ ವಿನಿಮಯ ಕಾರ್ಯಕ್ರಮಗಳಲ್ಲಿ ಸಹಕರಿಸಲು ಒಪ್ಪಿಕೊಂಡಿವೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ರಿಚರ್ಡ್ ಅಲೊಶಿಯಸ್ ಕೊಯಿಲೊ ಅವರು, ಥೀಮ್ ವಿವಿಯ ನಿರ್ದೇಶಕರಾದ ಥೀಮ್‌ವಂಡರ್

ಮಂಗಳೂರು : ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ವರ್ಗಾವಣೆ

ಆಡಳಿತ ಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಕಳೆದ ಎರಡು ವರ್ಷಗಳಿಂದ ಹಾಗೂ ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಉತ್ತಮ ನಿರ್ವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು